malnaddhvani.com

Thirthallinews shivamogganews localnews crimenews spots ripponpetenews hosangaranews sagaranews nrpuranews koppanews

ಏರ್‌ಕ್ರಾಫ್ಟ್ ಹಾರಾಟದ ಬಗ್ಗೆ ಭಯ ಬೇಡ: ಎಸ್‌ಪಿ ಯಶೋಧಾ ವಂಟಗೋಡಿ

ಹಾವೇರಿ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ Geological Survey of India ವತಿಯಿಂದ ಏರ್‌ಬಾರ್ನ್ ಜಿಯೋಫಿಸಿಕಲ್ ಸರ್ವೆ ಕಾರ್ಯ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಹಾವೇರಿ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಭೂಮಿಯ ಮೇಲ್ಮೈಗೆ ಕಡಿಮೆ ಎತ್ತರದಲ್ಲಿ ಏರ್‌ಕ್ರಾಫ್ಟ್ ಹಾರಾಟ ಕಂಡು ಬರುತ್ತಿದೆ.
ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು ಹಾಗೂ ಹಾವೇರಿ ತಾಲೂಕು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಏರ್‌ಕ್ರಾಫ್ಟ್ ಹಾರಾಟವು ಕೇವಲ ಜಿಯೋಫಿಸಿಕಲ್ ಸರ್ವೆ ಕಾರ್ಯಕ್ಕಾಗಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರು ಯಾವುದೇ ರೀತಿಯ ಭಯ ಅಥವಾ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ Yashodha Vantagodi ತಿಳಿಸಿದ್ದಾರೆ.
ಭೂಗರ್ಭದ ಖನಿಜ ಸಂಪತ್ತು ಹಾಗೂ ಭೂಗರ್ಭ ರಚನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಸರ್ವೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾರ್ಯವು 31.07.2026ರವರೆಗೆ ನಡೆಯಲಿದ್ದು, ಕೆಲವೊಮ್ಮೆ ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟ ಕಾಣಿಸಿಕೊಳ್ಳುವುದು ಸಹಜವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಸಹಕರಿಸುವಂತೆ ಹಾಗೂ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಎಸ್‌ಪಿ ಯಶೋಧಾ ವಂಟಗೋಡಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *