malnaddhvani.com

Thirthallinews shivamogganews localnews crimenews spots ripponpetenews hosangaranews sagaranews nrpuranews koppanews

ತೀರ್ಥಹಳ್ಳಿ ಭಾರತ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

ಅಡುಗೆ ಅನಿಲ ಹಾಗೂ ಇನ್ನಿತರ ಗೃಹ ಬಳಕೆ ವಸ್ತುಗಳ ದರ ಏರಿಕೆಯ ವಿರುದ್ಧ ತೀರ್ಥಳ್ಳಿಯ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು , ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಹಾಗೂ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ ಆರ್ ಮಂಜುನಾಥ್ ಗೌಡ ಅವರ ಮಾರ್ಗದರ್ಶನದಲ್ಲಿ ಮಹಿಳಾ ಕಾಂಗ್ರೆಸ್ ಘಟಕಗಳ ಅಧ್ಯಕ್ಷರಾದ ಗೀತಾ ರಾಘವೇಂದ್ರ ಹಾಗೂ ಮೈತಲಿ ಸತೀಶ್ ಅವರ ನೇತೃತ್ವದಲ್ಲಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಕಟ್ಟಿಗೆ ಒಲೆಯ ಮೂಲಕ ಕಾಫಿ ಮಾಡುವ ಮೂಲಕ ವಿಭಿನ್ನ ಶೈಲಿಯ ಪ್ರತಿಭಟನೆಯನ್ನು ನಡೆಸಲಾಯಿತು . ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *