
ಭದ್ರಾವತಿ ತಾಲ್ಲೂಕು ಮಟ್ಟದ 2026 -27ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆ ಶಾಸಕರು ಹಾಗೂ ಕೆ ಆರ್ ಐ ಡಿ ಎಲ್ ಅಧ್ಯಕ್ಷರಾದ ಬಿ.ಕೆ ಸಂಗಮೇಶ್ವರ ಅಧ್ಯಕ್ಷತೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆಯಿತು.
ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಮಾತನಾಡಿ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮುಂದೆ ಬಿಪಿಎಲ್ ಎಪಿಎಲ್ ಕಾರ್ಡ್ ತಿದ್ದುಪಡಿ ಆರಂಭ ಆಗಿರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ಪತ್ರ ಹಾಕಬೇಕು. ಇಲ್ಲವಾದಲ್ಲಿ ನೋಟಿಸ್ ನೀಡುವಂತೆ ಆಹಾರ ಇಲಾಖೆ ಅಧಿಕಾರಿ ಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಚಿರಾಗ್ ಗೌಡ, ಬಗರ್ ಹುಕುಂ ಸಮಿತಿ ಸದಸ್ಯ ಮುರುಗೇಶ್, ತಾಲ್ಲೂಕು ಕೆ ಡಿ ಪಿ ಸದಸ್ಯರುಗಳಾದ ಎಸ್ ರಾಜೇಂದ್ರ, ಬಿ.ಕೆ ರಮೇಶ್, ಮಂಜಪ್ಪ, ಮಹಮದ್ ಗೌಸ್, ಶ್ರೀಮತಿ ಜಯಲಕ್ಷ್ಮಿ, ಮುಖಂಡ ಧರ್ಮಗೌಡ, ಜುಂಜನಾಯ್ಕ್,
ತಾಲ್ಲೂಕು ಪಂಚಾಯತ್ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿ ಹನುಮನಾಯ್ಕ, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಆಶಾಲತಾ, ತಹಶೀಲ್ದಾರ್ ಪರುಸಪ್ಪ ಕುರಬರ ಉಪಸ್ಥಿತರಿದ್ದರು. ಕೆ ಡಿ ಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply